ಹಾಸನ: ಸಕಲೇಶಪುರ ತಾಲ್ಲೂಕಿನಲ್ಲಿ ಆನೆ ಕಾರಿಡಾರ್ ನಿರ್ಮಿಸಲು ಸರ್ಕಾರ ಯೋಜನೆ ರೂಪಿಸಿರುವುದರಿಂದ ಅರಣ್ಯ ವಾಸಿಗಳನ್ನು ಒಕ್ಕಲೆಬ್ಬಿಸದಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಶುಕ್ರವಾರ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಆನೆ ಹಾವಳಿ ತಡೆಯಲು ಆನೆ ಕಾರಿಡಾರ್ ಮಾಡಲು ಯೋಜನೆ ಸಿದ್ದಪಡಿಸಿದ್ದು, ಇದಕ್ಕಾಗಿ ₹ 20 ಕೋಟಿ ಬಿಡುಗಡೆ ಮಾಡಲಾಗಿದೆ.

ರೈತರು 2,500 ಎಕರೆ ನೀಡಲು ಮುಂದೆ ಬಂದಿದ್ದಾರೆ. ಹೀಗಿರುವಾಗ ಅವರಿಗೆ ತೊಂದರೆ ನೀಡಬಾರದು. ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ಹೋಗಲು ಅನುಮತಿ ನೀಡಬೇಕು ಹಾಗೂ ಮೂರು ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ರೈತರನ್ನು ಒಕ್ಕಲೆಬ್ಬಿಸಬಾರದು.

ಆನೆಗಳಿಗೆ ಬೇಕಾದ ಗಿಡಗಳನ್ನು ಬೆಳೆಸಬೇಕು. ಮರಗಳನ್ನು ಕಡಿಯಲು ಅನುಮತಿ ನೀಡದಂತೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್ ಅವರಿಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದರು.

ಇದಕ್ಕೆ ದನಿಗೂಡಿಸಿದ ಶಾಸಕ ಕೆ.ಎಂ.ಶಿವಲಿಂಗೇಗೌಡ, ಗ್ರಾಮೀಣ ಅರಣ್ಯ ಸಮಿತಿ ಮುಂದೆ ಅರ್ಜಿ ಸಲ್ಲಿಸದಿದ್ದರೆ ಅಂತಹವರಿಗೆ ತೊಂದರೆ ಕೊಡಬಾರದು. ಅವರಿಗೆ ಮಾಹಿತಿ ಇರುವುದಿಲ್ಲ. ಅವರಿಂದ ಹೊಸದಾಗಿ ಅರ್ಜಿ ಪಡೆದು ಒಕ್ಕಲೆಬ್ಬಿಸದಂತೆ ನೋಡಿಕೊಳ್ಳಿ. ಜೆಸಿಬಿ ತೆಗೆದುಕೊಂಡು ಗುದ್ದುವ ಕೆಲಸ ಮಾಡಬೇಡಿ ಎಂದರು.

ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹೆಸರು ನೋಂದಣಿ ಮಾಡಿಸದವರಿ ಗೆಲ್ಲಾ ಕೆಲಸ ಕೊಡಬೇಕು. ಗ್ರಾಮ ಪಂಚಾಯಿತಿಗಳು ಎಷ್ಟು ಕೋಟಿ ಕೆಲಸ ಬೇಕಾದರೂ ಮಾಡಿಸಬಹುದು. ಯಾವ ಕೆಲಸ ಮಾಡಬಹುದು ಎಂಬುದರ ಬಗ್ಗೆ ಗ್ರಾಮ ಪಂಚಾಯಿತಿಗಳಲ್ಲಿ ಫಲಕಗಳನ್ನು ಹಾಕಬೇಕು. ಮಾಹಿತಿ ಕೊರತೆಯಿಂದ ಯೋಜನೆ ಯಶಸ್ವಿಯಾಗುತ್ತಿಲ್ಲ ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ 54 ಸಾವಿರ ವೈಯಕ್ತಿಕ ಫಲಾಭನುವಿಗಳಿಗೆ ಅನುಕೂಲವಾಗು ವಂತೆ ₹1,200 ಕೋಟಿ ಕ್ರಿಯಾ ಯೋಜನೆಗೆ ಮಂಜೂರು ದೊರತಿದೆ. ಜಾಬ್ ಕಾರ್ಡ್ ಇದ್ದವರಿಗೆ ಕೆಲಸ ಕೊಡುವಂತೆ ಪಂಚಾಯಿತಿ ಅಭಿವೃದ್ಧಿಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹಣದ ಮಿತಿ ನಿಗದಿ ಮಾಡಿಲ್ಲ ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೆಂಕಟೇಶ್ ಕುಮಾರ್ ಸಭೆ ಗಮನಕ್ಕೆ ತಂದರು.

ರಾಜ್ಯ ಹಾಗೂ ಕೇಂದ್ರ ಸರ್ಕಾರ ಗಳು ಜಾರಿಗೆ ತರುವ ಯೋಜನೆಗಳು ಸಕಾಲದಲ್ಲಿ ಸಮರ್ಪಕವಾಗಿ ಜಾರಿಗೊಳ್ಳಬೇಕು. ಪರಿಶಿಷ್ಟ ಜಾತಿ, ವರ್ಗ ಜನಾಂಗದ ಅಭಿವೃದ್ಧಿಗೆ ಶೇ 18 ಮೀಸಲಿಟ್ಟು ಸದ್ವಿನಿಯೋಗ ಮಾಡಬೇಕು.

ಹಾಸನ ಹಾಗೂ ಸಕಲೇಶಪುರ ಎರಡೂ ಉಪವಿಭಾಗಗಳ ಮಟ್ಟದಲ್ಲಿ ಪ್ರತಿ 15 ದಿನಕ್ಕೊಮ್ಮೆ ಆಯಾ ಉಪವಿಭಾಗಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾಮಗಾರಿ ಹಾಗೂ ಅನುಷ್ಠಾನಗೊಳಿ ಸಿರುವ ಯೋಜನೆ ಬಗ್ಗೆ ಪರಿಶೀಲನಾ ಸಭೆ ನಡೆಸಿ ತಮಗೆ ವರದಿ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿದರು.

ಉಪ ವಿಭಾಗಾಧಿಕಾರಿಗಳ ಅಧ್ಯಕ್ಷತೆ ಯಲ್ಲಿ ಸಮನ್ವಯ ಸಮಿತಿ ರಚಿಸಿ ಕಂದಾಯ, ಗ್ರಾಮೀಣ ಅಭಿವೃದ್ಧಿ, ಕೃಷಿ, ತೋಟಗಾರಿಕೆ, ಮಹಿಳಾ ಮತ್ತು ಮಕ್ಕಳ ಇಲಾಖೆ, ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಚೆಸ್ಕಾಂ, ಇಲಾಖೆಗಳ ಯೋಜನೆಗಳ ಅನುಷ್ಠಾನದ ಬಗ್ಗೆ ನಿರಂತರ ಮೇಲುಸ್ತುವಾರಿ ನಡೆಯಬೇಕಿದೆ.

ಪ್ರತಿಯೊಂದು ಇಲಾಖಾ ಅಧಿಕಾರಿಗಳು ಹೆಚ್ಚಿನ ಜವಾಬ್ದಾರಿ ವಹಿಸಬೇಕು. ಕರ್ತವ್ಯ ಲೋಪವೆಸಗಿದಲ್ಲಿ ಅಂತಹವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಸಚಿವರು ಎಚ್ಚರಿಸಿದರು.

ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ಆರ್.ಟಿ.ಐ. ಮೂಲಕ ನಿಯಮನುಸಾರ ಬಡಕುಟುಂಬದ ಮಕ್ಕಳಿಗೆ ಪ್ರವೇಶ ಕಲ್ಪಿಸಲು ಖಾಸಗಿ ಶಾಲೆಯ ವ್ಯಾಪ್ತಿ ಪ್ರದೇಶದಲ್ಲಿ ಅರ್ಹ ಮಕ್ಕಳು ಇಲ್ಲದಿದ್ದಲ್ಲಿ ಪಕ್ಕದ ಪ್ರದೇಶದ ಮಕ್ಕಳಿಗೆ ಅವಕಾಶ ಕಲ್ಪಿಸುವಂತೆ ನಿರ್ದೇಶನ ನೀಡಿದ ಸಚಿವರು,

ಖಾಸಗಿ ಶಾಲೆಗಳನ್ನು ನಡೆಸಲು ನಿಯಮಾನುಸಾರ ಒಂದು ಎಕರೆ ಪ್ರದೇಶ ಹೊಂದಿರಬೇಕು. ಇದನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕಾಂತರಾಜ್ಗೆ ಸೂಚಿಸಿದರು.

300 ಕಾರ್ಡ್ಗಳಿಗಿಂತ ಹೆಚ್ಚು ಪಡಿತರ ಕಾರ್ಡ್ಗಳಿದ್ದರೆ ಬೇರೆ ನ್ಯಾಯಬೆಲೆ ಅಂಗಡಿ ಮಾಡಬೇಕು. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ 300 ಕಾರ್ಡ್ಗಳಿಗಿಂತ ಹೆಚ್ಚಿದ್ದರೆ ವಿಂಗಡಣೆ ಮಾಡಲು ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

ಶಾಸಕ ಎಚ್.ಕೆ.ಕುಮಾರಸ್ವಾಮಿ ಮಾತನಾಡಿ, ಆಲೂರು, ಸಕಲೇಶಪುರ, ಬೇಲೂರು ತಾಲ್ಲೂಕುಗಳು ಮಲೆನಾಡು ಪ್ರದೇಶಗಳಾಗಿದ್ದರೂ ಅಂತರ್ಜಲ ಮಟ್ಟ ಕುಸಿದಿದ್ದು, ಕೆಲವು ಗ್ರಾಮಗಳಿಗೆ ಕುಡಿಯುವ ನೀರಿಗೆ ತೊಂದರೆಯಾಗಿದೆ ಇವುಗಳನ್ನು ವಿಶೇಷವಾಗಿ ಪರಿಗಣಿಸಿ ನೀರಿನ ಸೌಲಭ್ಯ ಒದಗಿಸಬೆಕು ಎಂದು ಮನವಿ ಮಾಡಿದರು.

ತೆಂಗಿನಕಾಯಿ ಧಾರಣೆ ಕುಸಿದಿರುವ ಕಾರಣ ಕಾಸರಗೋಡಿನಲ್ಲಿ ಎಳನೀರಿಗಾಗಿಯೇ ಗಿಡ ಬೆಳೆಸುತ್ತಾರೆ. ಸದ್ಯ ಎಳನೀರಿನ ದರ ₹ 18 ರಿಂದ 20 ಇದೆ. ರೈತರ ಅನುಕೂಲಕ್ಕಾಗಿ ಅಲ್ಲಿಂದ ಎಳನೀರಿನ ಸಸಿ ತರಿಸಿ ರೈತರಿಗೆ ಕೊಡಬೇಕು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಸಲಹೆ ನೀಡಿದರು.
ಸಭೆಯಲ್ಲಿ ಶಾಸಕ ಎಚ್.ಎಸ್.ಪ್ರಕಾಶ್, ವಿಧಾನಪರಿಷತ್ ಸದಸ್ಯ ಗೋಪಾಲಸ್ವಾಮಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನವೀನ್ ರಾಜ್ ಸಿಂಗ್ ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ದೇವರಾಜ್, ಉಪಾಧ್ಯಕ್ಷ ಶ್ರೀನಿವಾಸ್, ಜಿಲ್ಲಾಧಿಕಾರಿ ವಿ.ಚೈತ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರವಾಡ್ ಹಾಜರಿದ್ದರು.

ಶೀಘ್ರದಲ್ಲಿಯೇ ಹೊಸ ಮರಳು ನೀತಿ ಜಾರಿಗೆ ಬರಲಿದ್ದು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮೂಲಕವೇ ಮರಳು ಹರಾಜು ಹಾಕಲಾಗುವುದು
–ಎ. ಮಂಜು
ಜಿಲ್ಲಾ ಉಸ್ತುವಾರಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.